ಬಾನು ಮುಷ್ತಾಕ್ ಇವರು ೦೩-೦೪-೧೯೪೮ರಲ್ಲಿ ಹಾಸನದಲ್ಲಿ ಜನಿಸಿದರು. ಬಿ.ಎಸ್.ಸಿ., ಎಲ್.ಎಲ್.ಬಿ. ಪದವೀಧರೆಯಾಗಿದ್ದಾರೆ. ಎಸ್.ಎ.ರೆಹಮಾನ್ ಮತ್ತು ಸಾರ್ವಜನಿಕ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಸದ್ಯ ಹಾಸನದಲ್ಲಿ ನ್ಯಾಯವಾದಿಯಾಗಿದ್ದಾರೆ.ಇವರು ಕನ್ನಡದ ನವ್ಯೋತ್ತರ ಲೇಖಕಿ. ಲಂಕೇಶ್ ಪತ್ರಿಕೆ ಮೂಲಕ ಬರವಣಿಗೆ ಆರಂಭಿಸಿದರು. == ಕೃತಿಗಳು == === ಕಥಾ ಸಂಕಲನ === ಹೆಜ್ಜೆ ಮೂಡಿದ ಹಾದಿ ಬೆಂಕಿ ಮಳೆ ಎದೆಯ ಹಣತೆ ಸಫೀರಾ ಬಡವರ ಮಗಳು ಹೆಣ್ಣಲ್ಲ == ಕಾದಂಬರಿ == ಕುಬ್ರ == ಲೇಖನ ಸಂಕಲನ == ಇಬ್ಬನಿಯ ಕಾವು == ಕವನ ಸಂಕಲನ == ಒದ್ದೆ ಕಣ್ಣಿನ ಬಾಗಿನ == ಕಾನೂನು ಕೃತಿಗಳು == ಕೌಟುಂಬಿಕ ದೌರ್ಜನ್ಯ ಕಾಯಿದೆ == ಸಾರ್ವಜನಿಕ ಸೇವೆಯ ವಿವರಗಳು == ಹಾಸನ ನಗರ ಸಭೆಗೆ 1983ರಿಂದ ಎರಡು ಅವಧಿಗೆ ನಗರಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಹಾಸನದ ಜಿಲ್ಲಾ ಶ್ರೀ ಚಾಮ ರಾಜೇಂದ್ರ ಆಸ್ಪತ್ರೆಯಲ್ಲಿ ಸಂದರ್ಶಕರ ಮಂಡಳಿಯ ಅಧ್ಯಕ್ಷೆಯಾಗಿದ್ದರು. ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆಯಾಗಿದ್ದರು. ಹಾಸನ ನಗರ ಗ್ರಂಥಾಲಯ ಸಮಿತಿಯ ಸದಸ್ಯೆಯಾಗಿದ್ದರು ಆಕಾಶವಾಣಿ ಬೆಂಗಳೂರು ಕೇಂದ್ರದ ಸಲಹಾ ಮಂಡಳಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದು. ಹಾಸನದ ಜಿಲ್ಲಾ ಸಮತಾ ವೇದಿಕೆಯ ಅಧ್ಯಕ್ಷೆಯಾಗಿ 1993ರಲ್ಲಿ ಮತ್ತು ಮಹಿಳಾ ವಿಕಾಸ ವೇದಿಕೆ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದಾರೆ. == ಬಾಹ್ಯ ಸಂಪರ್ಕ == ನಾರಾಯಣಪ್ರಸಾದ್ ಅವರ ಬಾಗ್ ಚಿಲುಮೆ == ಉಲ್ಲೇಖ ==